ಕಿಂಗ್‌ಸ್ಟನ್: ವೆಸ್ಟ್ ಇಂಡೀಸ್ ವಿರುದ್ಧ ಏಕೈಕ ಟಿ20 ಸರಣಿಯಲ್ಲಿ ಟೀಂ ಇಂಡಿಯಾ 9 ವಿಕೆಟ್ ಗಳಿಂದ ಹೀನಾಯ ಸೋಲು ಕಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 191 ರನ್ ಗಳ ಬೃಹತ್ ಗುರಿಯನ್ನೇ ನೀಡಿತು. ಈ ಮೊತ್ತವನ್ನು ಬೆನ್ನಟ್ಟಿದ ವೆಸ್ಟ್ ಇಂಡೀಸ್ ಪರ ಆಟಗಾರರ ಸ್ಫೋಟಕ ಬ್ಯಾಟಿಂಗ್ ನಿಂದಾಗಿ 18.3 ಓವರ್ ಗೆ 1 ವಿಕೆಟ್ ನಷ್ಟಕ್ಕೆ 194 ರನ್ ಸಿಡಿಸಿ ಗೆಲುವಿನ ನಗೆ ಬೀರಿತು.
ವೆಸ್ಟ್ ಇಂಡೀಸ್ ಪರ ಇವಿನ್ ಲೆವಿಸ್ ಭರ್ಜರಿ ಶತಕ ಸಿಡಿಸಿದರು. 62 ಎಸೆತಗಳಲ್ಲಿ 12 ಸಿಕ್ಸರ್ ಮತ್ತು 6 ಬೌಂಡರಿ ಸೇರಿದಂತೆ ಅಜೇಯ 125 ರನ್ ಸಿಡಿಸಿದ್ದು ವೆಸ್ಟ್ ಇಂಡೀಸ್ ಅಮೋಘ ಗೆಲುವಿಗೆ ಕಾರಣ ಕರ್ತರಾದರು.
ಟೀಂ ಇಂಡಿಯಾ ಪರ ಕೊಹ್ಲಿ 39, ದಿನೇಶ್ ಕಾರ್ತಿಕ್ 48, ರಿಷಭ್ ಪಂತ್ 38 ರನ್ ಪೇರಿಸಿದರು. ವಿಂಡೀಸ್ ಪರ ಟೇಲರ್ 31ಕ್ಕೆ 2 ವಿಕೆಟ್ ಗಳಿಸಿದ್ದಾರೆ.